Haridasa Sahitya — Vyasadasa

Jaya vayu hanumantha

ಜಯ ವಾಯು ಹನುಮಂತ

Composer: Vyasarajaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ ಗಿರಿಯ ಸಂಜೀವನವ ತಂದು ಬದುಕಿಸಿದ ಧುರದಲಿ ದುರ್ಯೋಧನನ ಬಲವನು ತಿಳಿದೆ ಅರಿತು ದುಷ್ಯಾಸನನ ಒಡಲನು ಬಗಿದೆ ಉರವ ತಪ್ಪಿಸಿ ಕೌರವನ ತೊ…

Transliteration

Jaya vayu hanumantha jaya bheema balavantha jaya purna mativantha jaya salaho santha ||pa|| Anjaneyali hutti andhu ramana seve nandadindali maadi kapi balava kudi sindhu langisi kalara vana bhangisi site- dungurava kotti lankapurava sutti || 1|| Harige chudamani yanitthu harigala kudi sharadiyanu katti aribalavanu kutti uraga bandandinda kapivararu maimareye giriya sanjivanava thandhu badukisida |…