Haridasa Sahitya — Vyasadasa

Jaya rayaara nodiro

ಜಯರಾಯರ ನೋಡಿರೋ ಸಜ್ಜನರೆಲ್ಲ

Composer: Vijaya Dasaru · Deity: Jayateertharu · Genre: Bhakti

Kannada lyrics

ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ||pa|| ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ||a.pa|| ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ ಸ್ತರ ಮಾಡಿದಾ ಕರದ ಕನ್ನಡಿಯಂತೆ ||1|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥ ಸುಜ್ಞಾನ ಸತ್ಯವೆನಿಸಿ ಈ ಧರಿಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ದಂಡವಾದ ಗುರುತಿಲಕ ||2|| ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ||3||

Transliteration

Jayarayaraa nodiro sajjanarella | Jayaraayara paadiro || pa || Jayaraayaraa nodi japisi manadi paadi | Jayavaaguvudu nimage bhayanaasha samtata || a.pa. || Durula matavembo karige ankushavittu | Surasaada granthavaananda muni | Virachisi iralaagi parama bhaktiyinda | Vistaara maadida karada kannadiyante || 1 || Vaadigalanella jayisi Dangura hoysi | Bhedaarthaj~jaana satyavenisi | Ee dhareyolu hari…