Haridasa Sahitya — Vyasadasa
Jaya ramaa devi
ಜಯ ರಾಮಾ ದೇವಿ ಸಾಗರ ಕನ್ನಿಕೆ
Composer: Mahipati Dasaru · Deity: Lakshmi Devi · Genre: Dasara Pada
Kannada lyrics
ಜಯ ರಾಮಾ ದೇವಿ ಸಾಗರ ಕನ್ನಿಕೆ ||ಪ|| ಪದ್ಮ ಪದ್ಮಾಲಯೇ ಪದ್ಮದಳಲೋಚನೆ | ಪದ್ಮಪ್ರಿಯೇ ದಿವ್ಯ ಪದ್ಮವದನೆ || ಪದ್ಮವಕ್ಷೋಜಾತಿ ಪದ್ಮಕಳ ಶೋಭಿತೆ | ಪದ್ಮಾಸನೇನುತ ಪದ್ಮಚರಣೆ || 1 || ಮಂಗಳಾತ್ಮಕ ನೀಲಭೃಂಗ ಕುಂತಲಶಶಿ ಪ- ತಾಂಗ ಸನ್ನಿಭ ಕೋಮಲಾಂಗೆ ವರದೆ || ಗಂಗೇಯ ವಾಸನಾ ಸರ್ವಾಂಗ ರತ್ನಾಭರಣೆ | ಅಂಗಜಜನನಿ ಶ್ರೀರಂಗಪ್ರಿಯೇ || 2 || ಸತತ ಜಗದತ್ಪತ್ತಿ ಸ್ಥಿತ್ಯಂತಕಾರಿಣಿ | ನುತಗುಣ ಮಹಿಮಾಯ ಶ್ರುತಿ ಪೂಜಿತೆ || ಪತಿತಪಾವನ ಮಹಿಪತಿನಂದನಿಷ್ಟೇ | ದೇವತಿ ಭಕ್ತಜನ ಸುಖದ ಮತಿ ದಾಯಿತೆ || 3 ||
Transliteration
Jaya raama devi sagara kannike ||pa|| Padma padmalaye padmadalalocane | Padmapriye divya padmavadane | Padmavakshojati padmakala sobite | Padmasanadenuta padmacharane ||1|| Mangalatmaka nilabranga kuntalasasi pa- Tanga sanniba komalangi varade || Gangeya vasana sarvanga ratnabarane | Angajajanani srirangapriye ||2|| Satata jagadutpate sthitiyante karine | Nutaguna mahimaya Sruti pujite || Patitapa…