Haridasa Sahitya — Vyasadasa

Jaya Mangalam – avathara traya mukhya prana mangalam

ಜಯಮಂಗಲಂ ನಿತ್ಯ ಶುಭಮಂಗಲಂ

Composer: Kanakadasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಜಯಮಂಗಲಂ ನಿತ್ಯ ಶುಭಮಂಗಲಂ ||pa|| ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆ| ಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ||1|| ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆ| ಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ||2|| ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ| ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ||3||

Transliteration

Jayamangalam nitya subamangalam ||pa|| Vatajatanu Agi kyatiyali meredagesetuveya Baradinda langisidage| Siteyanu vandisute unguravanittavagedaityapuravanu Baradalurisidavage ||1|| Vasudheyali kuntinandananagi udisidagekusumavanu tandu draupadigittage| Kusalatanadali kauravadigala samharisi-dasahaya vira sri bimasenage ||2|| Madhyagruhadatana satiyalli udisidagebauddha carvaka maygala jaridage| Mad…