Haridasa Sahitya — Vyasadasa

Jaya mangala vrundavanadevige

ಜಯ ಮಂಗಳ ವೃಂದಾವನದೇವಿಗೆ

Composer: Purandara Dasaru · Deity: Tulasi · Genre: Bhakti

Kannada lyrics

ಜಯ ಮಂಗಳ ವೃಂದಾವನದೇವಿಗೆ||pa|| ನೋಡಿದ ಮಾತ್ರಕೆ ದೋಷ ಸಂಹಾರಿಗೆ ಬೇಡಿದ ವರಗಳ ಕೊಡುವವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡ ನೀಡಾಡುವ ಗುಣವಂತೆಗೆ||1|| ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ ಮುದದಿಂದುದ್ಧರಿಸುವ ಮುನಿವಂದೈಗೆ ಕೊಟ್ಟರೆ ನೀರನು ಬೇರಿಗೆ ಕಾಲನ ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ||2|| ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ ಚಿತ್ತವಲ್ಲಭ ಕೃಷ್ಣನ್ಹರುಷದಲಿ ಅತ್ಯಂತವಾಗಿ ತಾ ತೋರಿ ಭವದ ಬೇರ ಕಿತ್ತು ಬಿಸಾಡುವ ಕೋಮಲೆಗೆ||3|| ಕೋಮಲವಾಗಿದ್ದ ದಳಮಂಜರಿಗಳ ಪ್ರೇಮದಿಂದಲಿ ತಂದು ಶ್ರೀಹರಿಗೆ ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ ಕಾಮಿತಾರ್ಥವನೀವ ಸದ್ಗುಣಿಗೆ||4|| ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ ನಿಷ್ಠ…

Transliteration

Jaya mangala vrundavanadevige||pa|| Nodida matrake dosha samharige Bedida varagala koduvavalige Made vamdaneyanu manujara papada Guda nidaduva gunavantege||1|| Muttida matrake muktara maduva Mudadnduddharisuva munivandaige Kottare niranu berige kalana Muttilisada hage malpalige||2|| Bitti belasi tanna heccisidavarige Cittavallaba krushnanharushadali Atyantavagi ta tori Bavada bera Kittu bisaduva k…