Haridasa Sahitya — Vyasadasa

Jaya jaya mooshika

ಜಯ ಜಯ ಮೂಷಕಗಮನಾಜಯ

Composer: Vijaya Dasaru · Deity: Ganesha · Genre: Bhakti

Kannada lyrics

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ||pa|| ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1|| ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತ ಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2|| ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲ ರೇಯನದೂತನು ನೀನೆ ಪಾಶಾಂಕುಶಧರನೆ ||3||

Transliteration

Jaya jaya mushakagamana jaya jaya gajanana Jaya jaya nagabarana jaya ekadamta jaya jaya ||pa|| Matiya kodu parvatiya nija tanujanebidade ninnanu nanu Nutisuve kshitiyolagesri lakumi patiya kondadi Sadgatiyapadeyuvadakke sarathiyagu deva ||1|| Akasadabimani angajana chapanirakarisi Bisuta lambodarane^^Eka pingadigala priya hasta Chatushtalokadolu Bajisuvara vidyada nidhiye ||2|| Sitaramananinda puj…