Haridasa Sahitya — Vyasadasa
Jaya devi jaya devi
ಜಯದೇವಿ ಜಯದೇವಿ ಜಯ ಅದಿಸಕ್ತಿ
Composer: Mahipati Dasaru · Deity: Vishnu · Genre: Lakshmi Devi
Kannada lyrics
ಜಯದೇವಿ ಜಯದೇವಿ ಜಯ ಆದಿಶಕ್ತಿ | ಜಯಜಯ ಚಂದ್ರಲೆಮಾತೆ ರವಿಶತ ನಿಜದೀಪ್ತಿ ||ಪ|| ಸುರಮುನಿ ಸೇವಿತವಾದ ಚಾರುವಿಲಾಸದಲಿ | ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲಿ | ಕರುಣದಿ ಭೀಮರಥಿಯ ಬಂದು ನೀ ತೀರದಲಿ | ದಾರಿ ತಪ್ಪಿದ ದುರುಳನ ಮರ್ದಿಸಿ ಭ್ರಮರದಲಿ ||೧|| ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ | ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ | ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ | ಛಂದದಿ ಇಹಪರ ಸುಖವ ಪಡೆದರು ಸುಲಭದಲಿ||೨|| ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ | ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ | ಆವಗು ಬೆಳಗುವ ಮಹಿಪತಿ ನಂದನ ತಾ ನಮಿಸಿ | ಕಾವುದು ಶರಣರ ಅನುದಿನ ಅಪರಾಧವ ಕ್ಷಮಿಸಿ ||೩||
Transliteration
Jayadevi jayadevi jaya adisakti| Jayajayachandralemate ravisata nijadipti ||pa|| Suramuni sevitavada caruvilasadali | Irutire narayanamuni Bakutige premadali | Karunadibimarathiya bamdu ni tiradali | Dari tappida durulana mardisi brumaradali ||1|| Andigindige nimtu prasannati gramadali | Dvandvacaranava dori mukutige kunadali | Bandava darsana sparsana pujana madutali | Chandadi ihapara sukava pad…