Haridasa Sahitya — Vyasadasa

jAratvavanu mADida pApagaLigellA

ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ

Composer: Vyasarajaru · Deity: Hari · Genre: Ugabhoga

Kannada lyrics

ಜಾರತ್ವವನು ಮಾಡಿದ ಪಾಪಗಳಿಗೆಲ್ಲಾ ಗೋಪೀಜನ ಜಾರನೆಂದರೆ ಸಾಲದೆ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕೊಂದವನೆಂದರೆ ಸಾಲದೆ? ಪ್ರತಿದಿವಸ ಮಾಡಿದ ಪಾಪಂಗಳಿಗೆ ಎಲ್ಲಾ ಪತಿತಪಾವನನೆಂದು ಕರೆದರೆ ಸಾಲದೆ? ಇಂತಿಪ್ಪ ಮಹಿಮೆಯೊಳೊಗೊಂದನ್ನಾದರೂ ಒಮ್ಮೆ ಸಂತಸದಿ ನೆನೆಯೆ ಸಲುವ ಸಿರಿಕೃಷ್ಣ ||

Transliteration

jAratvavanu mADida pApagaLigellA gOpIjana jAranegdare sAlade? cOratvavanu mADida pApagaLigella navanIta cOranegdare sAlade? krUratvavanu mADida pApagaLigella mAvana kogdavanegdare sAlade? pratidivasa mADida pApaggaLige ellA patitapAvananegdu karedare sAlade? igtippa mahimeyoLogogdannAdarU omme santasadi neneye saluva sirikRuShNa |