Haridasa Sahitya — Vyasadasa

Japava madidharenu

ಜಪವ ಮಾಡಿದರೇನು

Composer: Kanakadasaru · Deity: Hari · Genre: Advice

Kannada lyrics

ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ||pa|| ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲು| ಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು ||1|| ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲುಅಡವಿಯೊಳು ಕೆರೆ ತುಂಬಿ ಬತ್ತಿದಂತೆ ಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||2|| ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿ ಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ ||3||

Transliteration

Japava madidarenu tapava madidarenu viparita kapataguna kalusaviddavaru||p|| Adi guruvariyade attalittalu tolali veda shastrava nodi bayaralu Hadiyenu kanadantirdu halaventu vada tarkadolidda bhedavadigalu||1|| Nudi nadeva kaladali dana madade iralu adaviyolu keretumbi battidante Madadi makkaligendu odave vastravagalise hidiyala yamanavara kattigolagagi||2|| Cali maleyu ati karugattaleyolage eddu…