Haridasa Sahitya — Vyasadasa

japa

ಜಪ

Composer: Purandara Dasaru · Deity: Hari · Genre: Ugabhoga

Kannada lyrics

(ಜಪ) ಮಧ್ಯಾಂಗುಲಿಯ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ (ಬಗ್ಗಿಸಿ?) ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿಯ ಬುದ್ಧಿಪೂರ್ವಕದಿಂದ ಗೆಯ್ವುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ್ನ ಎದ್ದೆದ್ದು ನೋಡುವ ಬಗೆ ಕಾಣಲು ಬೇಕು

Transliteration

(japa) Madhyanguliya mele manisaravittinnu Baddha angutagra enisabeku Kiri anguli panca bogisi irabeku Badravagi nillisi niru sorade gayatriya Buddhipurvakadinda geyvutalirabeku Muddumuruti namma purandaravithalanna Eddeddu noduva bage kanalu beku