Haridasa Sahitya — Vyasadasa

Jaliya maradante dhareyolu durjanaru

ಜಾಲಿಯ ಮರದಂತೆ ಧರೆಯೊಳು ದುರ್ಜನರು

Composer: Purandara Dasaru · Deity: Hari · Genre: Philosophy

Kannada lyrics

ಜಾಲಿಯ ಮರದಂತೆ ಧರೆಯೊಳು ದುರ್ಜನರು||pa|| ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ||a.pa|| ಬಿಲಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ||1|| ಊರ ಹಂದಿಗೆ ಷಡ್ರಸಾನ್ನವನಿಕ್ಕಲು ನಾರುವ ದುರ್ಗಂಧ ಬಿಡಬಲ್ಲುದೆ ಘೋರಪಾಪಿಗೆ ತತ್ವಜ್ಞಾನವ ಪೇಳಲು ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ||2|| ತನ್ನಿಂದ ಉಪಕಾರ ತೊಟಕಾದರು ಇಲ್ಲ ಬಿನ್ನಾಣದ ಮಾತಿಗೆ ಕೊನೆಯಿಲ್ಲ ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಠಲ||3||

Transliteration

Jaliya maradante dhareyolu durjanaru||pa|| Mulagra pariyante mullu kudippante||a.pa|| Bililalli balali bandavarige neralilla Hasidu bandavarige hannu illa Kusuma vasaneyilla kudalu sthalavilla Rasadalli svadavu vishadante irutiha||1|| Ura handige shadrasannavanikkalu Naruva durgandha bidaballude Gorapapige tatvaj~janava pelalu Krura karmava bittu sujananaguvane||2|| Tanninda upakara totakadaru ill…