Haridasa Sahitya — Vyasadasa

Varada sulaadhi

ವರದ ಸುಳಾದಿ

Composer: Jagannatha Dasaru · Deity: Hari · Genre: Sulaadi

Kannada lyrics

ವರದ ಸುಳಾದಿ ರಾಗ: ಆನಂದಭೈರವಿ ಅಂಕಿತ: ಜಗನ್ನಾಥವಿಠ್ಠಲ ಧ್ರುವತಾಳ ವರದ ವರದ, ಶೋಭಿವರ, ವರದಾಯಕ, ಪರಮ ಪುರುಷೋತ್ತಮ, ಅಮಿತ ಮಹಿಮ. ಶರಣಾಗತರ ಕಲ್ಪತರುವೆ, ವಿಮಲಾಂಬುರುಹ, ನಿರುಪಮ, ನಿರ್ದೋಷ, ನಿಖಿಳ ನಿಷೇಧಶೇಷ, ಮರಣಜನನರಹಿತ, ಲೋಕಮಹಿತ. ಶ್ರೀ ಸರಸಿಜಭವ, ವಾಯು, ವಾಣಿ, ಭಾರತಿ, ಗರುಡ, ಶೇಷ, ಇಂದ್ರ ದೇವೋತ್ತಂಸ, ಹಂಸಾ. ಸ್ವರತ, ಸ್ವತಂತ್ರನೆ, ಸುಗುಣಭರಿತ, ಸೌಭಾಗ್ಯವಂತ, ನಿರುತ ಎನ್ನಂತರಂಗವಾಸ, ಶ್ರೀಶಾ. ಹರಿಯೆ, ನೀನಲ್ಲದನ್ಯರನರಿಯೆ; ಎಮ್ಮ ಸಾಕುವ ಧೊರೆಯೆ, ದೂರುವೆ, ಎನ್ನ ಮೊರೆಯ ಕೇಳೊ. ಮರಳಿ ಮರಳಿ ಎನ್ನ ದುರುಳ ವಿಷಯಂಗಳಿ- ಗೆರಗಿಸಿ ಕಂಗೆಡಿಪ ಕರಣಂಗಳು. ಇರುಳು ಹಗಲು ನಿನ್ನ ಪರವಾಗಿರಲಿ, ಬಾಹ ದುರಿತಕೋಟಿಗಳಿ…