Haridasa Sahitya — Vyasadasa

Srihari mahima sulaadhi

ಶ್ರೀಹರಿ ಮಹಿಮಾ ಸುಳಾದಿ

Composer: Jagannatha Dasaru · Deity: Hari · Genre: Sulaadi

Kannada lyrics

ಶ್ರೀಹರಿ ಮಹಿಮಾ ಸುಳಾದಿ ರಾಗ: ಅಭೋಗಿ ಧ್ರುವತಾಳ ಶುಭದ ಸುಂದರಕಾಯ, ವಿಬುಧ ಸನ್ಮುನಿಗೇಯ, ಅಬುಜ ಅಂಡೋದರ, ನಿರ್ವಿಕಾರ, ತ್ರಿಭುವನನುತ, ಭಾವನ, ತ್ರಿಗುಣಾತೀತ, ನಿತ್ಯ, ದು- ರ್ಲಭ, ದುರ್ವಿಭಾವ್ಯ, ದೂರೀಕೃತ ದುರಿತ. ನಭಗವರ ವಾಹನ, ನಳಿನಲೋಚನ, ಚನ್ನ, ಇಭರಾಜವರದ, ಇಂದಿರೆ ಅರಸ, ಉಭಯ ಸ್ಥಾನದಿ ವ್ಯಾಪ್ತ, ತತ್ತದ್ದೋಷ ನಿರ್ಲಿಪ್ತ, ಸಭೆಯೊಳು ದ್ರೌಪದಿಯ ಕರೆದ ಕರುಣಿ. ನಿಬಿಡ ಪಂಕದಿ ಸಿಲುಕಿಬಿದ್ದು ಬನ್ನ ಬಡುವ ಅಬಲರ ಉದ್ಧರಿಸೊ ಅಬ್ಧಿಶಯನ. ಸುಭುಜ, ನಾಮಕ ಜಗನ್ನಾಥವಿಠ್ಠಲ, ನಿನ- ಗಭಿವಂದಿಸುವೆ, ಎನಗಭಯವಿತ್ತು ಸಲಹೊ ॥೧॥ ಮಟ್ಟತಾಳ ಪ್ರತಿಪ್ರತಿ ಕಲ್ಪ ಸಾ, ಪ್ರತಿಪ್ರತಿ ಜೀವಿಗೆ, ಪ್ರತಿಪ್ರತಿ ಯುಗಗಳಲಿ, ಪ್ರತಿಪ್ರತಿ ದ…