Haridasa Sahitya — Vyasadasa
Jaganmohanane krushna
ಜಗನ್ಮೋಹನನೇ ಕೃಷ್ಣ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಜಗನ್ಮೋಹನನೇ ಕೃಷ್ಣ ಜಗವಂ ಪಾಲಿಪನೆ ॥ಪ॥ ಒಬ್ಬಳ ಬಸುರಿಂದಲಿ ಬಂದೆ ಮ ತ್ತೊಬ್ಬಳ ಕೈಯಲಿ ನೀ ಬೆಳೆದೆ ಕೊಬ್ಬಿದ ದೈತ್ಯರ ಒಡಲ ಸೀಳಿದೆ ಇಂಥ ತಬ್ಬಿಬ್ಬಾಟವನೆಲ್ಲಿ ಕಲಿತೆಯೊ ರಂಗ ॥೧॥ ಲೋಕದೊಳಗೆ ನೀ ಶಿಶುವಾಗಿ ಮೂ ರ್ಲೋಕವನೆಲ್ಲ ಬಾಯಲಿ ತೋರಿದೆ ಆಕಳ ಕಾಯುವ ಚಿಣ್ಣನೆಂದೆನಿಸಿದೆ ಈ ಕುಟಿಲವನೆಲ್ಲಿ ಕಲಿತೆಯೊ ರಂಗ ॥೨॥ ಮಗುವಾಗಿ ಪೂತನಿಯ ಮೊಲೆಯನುಂಡೆ ಅವಳು ಜಗದಗಲಕೆ ಬೀಳಲು ಕೆಡಹಿ ನಗುತ ನಗುತ ಗೋಪಿ ಮೊಲೆಯುಂಡೆ ಇಂಥ ತಗಿಬಿಗಿಯಾಟಗಳೆಲ್ಲಿ ಕಲಿತೆಯೊ ರಂಗ ॥೩॥ ಮಾಡುವ ಧುಮುಕಿ ಕಾಳಿಂಗನ ಶಿರದಲ್ಲಿ ಮೃಡಸುರಪಾದ್ಯರು ಪೊಗಳುತಿರೆ ಹೆಡೆಯ ಮೇಲೆ ಕುಣಿದಾಡುತ ಆಡುತ ಕಡೆ ಸಾರೆಂಬುದನೆಲ್ಲಿ ಕಲಿತೆಯೊ ರಂಗ ॥೪॥ ಒಂದು ಪಾದವ ಭೂಮಿಯಲೂರ…
Transliteration
Jaganmohanane krushna jagavam palipane ||pa|| Obbala basurindali bande ma Ttobbala kaiyali ni belede Kobbida daityara odala silide intha Tabbibbatavanelli kaliteyo ranga ||1|| Lokadolage ni sisuvagi mu Rlokavanella bayali toride Akala kayuva cinnanemdeniside I kutilavanelli kaliteyo ranmga ||2|| Maguvagi putaniya moleyanunde avalu Jagadagalake bilalu kedahi Naguta naguta gopi moleyunde intha Tagib…