Haridasa Sahitya — Vyasadasa

Jaana ne nahudo

ಜಾಣ ನೀನಹುದೋ ಗುರುಮುಖ್ಯಪ್ರಾಣ

Composer: Vyasarajaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ||pa|| ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವ ಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ||a.pa|| ಧೀರ ನೀನಹುದೋ ವಾಯುಕುಮಾರ ನೀನಹುದೊ ಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿ ಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ ||1|| ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊ ರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ||2|| ಚಂಡ ನೀನಹುದೊ ದುರಿತ ಮಾರ್ತಾಂಡ ನೀನಹುದೊ ಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀ…

Transliteration

Raani bhaarati ramana ninagene | Kaane tribhuvanadolage sarva | Praanigala hrudayadali mukhya | Praananendenisideyo swaami || a. Pa. || Dheera neenahudo vaayukumaara neenahudo | Saaridavara manorathangala | Baari baarige koduvenenutali | Ksheera nadi teeradali nelesiha | Maarutana avataara hanuma || 1 || Dhitta neenahudo bettava tandittava neenahudo | Ratte hididakshaya kumaarana | Kutti daityara…