Haridasa Sahitya — Vyasadasa
Ivana hididukondu hogelo
ಇವನ ಹಿಡಿದುಕೊಂಡು ಹೊಗೆಲೋ
Composer: Purandara Dasaru · Deity: Hari · Genre: Philosophy
Kannada lyrics
ಇವನ ಹಿಡಿದುಕೊಂಡು ಹೊಗೆಲೋ ಜೋಗಿ ।।ಪ।। ಇವ ನಮ್ಮ ಮಾತ ಕೇಳದೆ ಪುಂಡನಾದ ।।ಅ.ಪ।। ಆಡುತಾಡುತ ಹೋಗಿ ನೀರೊಳು ಮುಳುಗಿದ ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ ದಾಡೆಯ ಮೇಲೆ ತಾ ಧಾರಿಣಿ ನೆಗಹಿದ ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ ।।೧।। ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ ಬಿಲ್ಲು ಹಿಡಿದು ರಾಕ್ಷಸರನು ಸವರಿದ ಬಲ್ಲಿದ ಮಾವನ ಶಿರವನ್ನು ತರಿದ ।।೨।। ಬತ್ತಲೆ ಕುದುರೆಯ ಹತ್ತಬೇಡೆಂದರೆ ಹತ್ತಿದನೋ ಇವ ಛಲದಿಂದ ಭಕ್ತವತ್ಸಲ ಸಿರಿ ಪುರಂದರವಿಠಲ ಎತ್ತಲಾದರೂ ಕೊಂಡು ಹೋಗೆಲೊ ಜೋಗಿ ।।೩।।
Transliteration
Ivana hididukondu hogelo jogi ||pa|| Iva namma mata kelade pundanada ||a.pa|| Adutaduta hogi nirolu mulugida Bedavendare betta bennalli hotta Dadeya mele ta dharini negahida Hidiya hodare baya teredu anjisida ||1|| Hullali viprana kanna tivida buddhi Illemdare kaili kodaliya pidida Billu hididu rakshasaranu savarida Ballida mavana Siravannu tarida ||2|| Battale kudureya hattabedendare Hattidano iv…