Haridasa Sahitya — Vyasadasa
Itaniga vasudevanu
ಈತನೀಗ ವಾಸುದೇವನು
Composer: Kanakadasaru · Deity: Krishna / Govinda / Mukunda · Genre: Bhakti
Kannada lyrics
ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು ।।ಪ॥ ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ।।ಅ.ಪ॥ ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ ।।೧।। ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ ಶರಗಳನ್ನು ತೀಡುತಿಪ್ಪನ ಯೋಚಿಸಿ ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ ಶಿರವನ್ನು ಛೇದಿಸಿದ ದೇವ ಕಾಣಿರೋ ।।೨।। ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬ…
Transliteration
Itaniga vasudevanu lokadodeya Itaniga vasudevanu ||pa|| Itaniga vasudeva I samasta lokadodeya Dasagolidu teraneri teji pididu nadesidata ||a.pa|| Dhanujeyaldanannanayyana pitana ;de kauravendra Nanujeyalidavana Sirava kattarisuta tanna Anujeyalidavana bemki muttada te kayda rukma Nanujeyalidavana murtiyannu nodiro ||1|| Narana sutanaranyadali giriyolnimtu tanna roshadi Saragalannu tidutippana yoci…