Haridasa Sahitya — Vyasadasa

Itane sri prahladhanu

ಈತನೇ ಶ್ರೀ ಪ್ರಲ್ಹಾದನು

Composer: Haridasa · Deity: Raghavendra Teertharu · Genre: Dasara Pada

Kannada lyrics

ಈತನೇ ಶ್ರೀ ಪ್ರಲ್ಹಾದನು ಆಹ್ಲಾದಕರನು || ಪ || ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು || ಅ || ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆ ಕಷ್ಟಬಡಿಸೆ ಸುತಗೆ ಜವದಲಿ ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು || ೧ || ಶೂರ ಬಾಲ್ಹೀಕನೆನಿಸಿದ ಬ್ರಹ್ಮಣ್ಯಮುನಿ ಪಾ ದಾರವಿಂದ ದಯದಿ ಭಜಿಸಿದ ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು || ೨ || ಸಿಂಧುಶಯನ ಶ್ರೀರಮಾಪತಿವಿಠ್ಠಲನ ಭಕುತಿ ಯಿಂದ ಭಜಿಪ ರಾಘವೇಂದ್ರ ಯತಿ ಎಂದೆನಿಸುತ ಮಂತ್ರ…

Transliteration

Itane sri pralhadanu ahladakaranu || pa || Itane prahlada jaganmatalakumipatiya gunava Butaladalli tori bahu nirbitiyimda mereda guru || a || Dushta hiranyaka bahuvidhadalli nishkaruniyage Kashtabadise sutage javadali Srushtigodeya sthambadinda drushtanagi asuranandana Sreshtha nakadim bageye hariya nishtheyinda namisida guru || 1 || Sura balhikanenisida brahmanyamuni pa Daravimda dayadi Bajisida…