Haridasa Sahitya — Vyasadasa

Itane kaniro madhwamuni

ಈತನೆ ಕಾಣಿರೊ ಮಧ್ವಮುನಿ

Composer: Vadirajaru · Deity: Sri Madhwacharyaru · Genre: Dasara Pada

Kannada lyrics

ಈತನೆ ಕಾಣಿರೊ ಮಧ್ವಮುನಿ || ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ ಚರಿಸುತ್ತಹರಿಯೆ ಸರ್ವೋತ್ತಮನೆಂಬ ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ || ಸಕಲಾಗಮಗಳೆಂಬ ಶರಧಿಯೊಳಗೆ ಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ || ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡು ಆದಿಮೂರುತಿ ಶ್ರೀ ಹಯವದನನ ದಿವ್ಯ ಪಾದ ಸೇವಕನಾದ ಮಧ್ವಮುನಿಯೆಂಬಾತ ||

Transliteration

Itane kaniro madhwamuni || pa || Paripari sutigalemba guhegalalli ke sariyante Charisutta hariye sarvottamanemba Goshagalinda durulavadigalemba narigalodisidata || 1 || Sakalagamagalemba saradhiyolage Mukutiyali mathisi akalanka srihariyemba Ratnava kandu mukutadolagittu lokadi meredata || 2 || Vedasaranemba isatatta vada sude ya kalpisikondu Adimuruti srihayavadanana divsa Padasevakanada madhvamu…