Haridasa Sahitya — Vyasadasa

Itane guru raghavendra

ಈತನೇ ಗುರು ರಾಘವೇಂದ್ರಾ

Composer: Haridasa · Deity: Raghavendra Teertharu · Genre: Dasara Pada

Kannada lyrics

ಈತನೇ ಗುರು ರಾಘವೇಂದ್ರಾ – ಖ್ಯಾತ ಕಾಣಿರೋ || ಪ || ವಾತಮತದುಗ್ದಾಬ್ಧಿ ಚಂದ್ರ ಸು-ಖಾತಿಶಯಗಳ ನೀವ ನಿರುತ || ಅ || ಹಿಂದೆ ಹೇಮಕಶ್ಯಪನ ಸುತ ನೆಂದು ಕರೆಸಲು ಓಂ ನಮಃ ಶಿವ ಎಂದು ಬರೆಯಲು ಹೇಳಲಾಪಿತನು ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು ತೋರೆಲವೊ ಸ್ಥಂಭದಿ ಇಂದು ನಿನ್ನನು ಕಾವದೇವರನು ಎಂದೆನ್ನಲವನು ಇಂದಿರೇಶನ ದ್ವಂದ್ವರೂಪವ ಅಂದುತೋರಿದ ಮಹಿಮನೋ || ೧ || ವ್ಯಾಸಮುನಿಯಾಗವತರಿಸಿ ಜೀ ವೇಶರೊಂದೆಂಬ ಮಾಯಿಗಳ ಕು ಭಾಷ್ಯಗಳೆಲ್ಲ ತಾ ಕೆಡಿಸಿ – ಸರ್ವಜ್ಞ ಶಾಸ್ತ್ರವ ಲೇಸಿನಲಿ ಸಜ್ಜನಕೆ ಬೊಧಿಸಿ – ದುರ್ವಾದಿಗಳ ಸ ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ ಹರಿಪ್ರೀತಿಗೊಳಿಸಿ ಕೇಶವನೆ ಪರನೆಂದು ಸಾರುತ ದಾಶರಥಿನಿಜದಾಸ್ಯ…

Transliteration

itane guru raghavendra – kyata kaniro || pa || vatamatadugdabdhi chandra su-katisayagala niva niruta || a || hinmde hemakasyapana suta nendu karesalu om namah siva endu bareyalu helalapitanu narayanane paranendu bareyalu roshadali kalanu torelavo sthambadi imdu ninnanu kavadevaranu emdennalavanu indiresana dvamdvarupava andutorida mahimano || 1 || vyasamuniyagavatarisi ji vesarondemba mayigala ku…