Haridasa Sahitya — Vyasadasa
Ishtu dina I vaikuntha
ಇಷ್ಟು ದಿನ ಈ ವೈಕುಂಠ
Composer: Kanakadasaru · Deity: Narayana · Genre: Bhakti
Kannada lyrics
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ || ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ || ವನ ಉಪವನಗಳಿಂದ ಘನ ಸರೋವರಗಳಿಂದ ಕನಕ ಗೋಪುರಗಳಿಂದ ಘನಶೋಭಿತನೆ ಶ್ರೀರಂಗಶಾಯಿ || ವಜ್ರ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ || ರಂಭೆ ಊರ್ವಶಿಯರ ಮೇಳವ ಕಂಡೆ ತುಂಬುರು ಮುನಿ ನಾರದರನು ಕಂಡೆ ಅಂಬುಜೋದ್ಭವ ರುದ್ರರ ಕಂಡೆ ಶಂಬರಾರಿಪಿತನೆ ಶ್ರೀರಂಗಶಾಯಿ || ನಾಗಶಯನನ ಮೂರುತಿ ಕಂಡೆ ಭೋಗಿಭೂಷಣ ಶಿವನನು ಕಂಡೆ ಭಾಗವತರ…
Transliteration
Ishtu dina I vaikuntha eshtu duravo ennutalidde Drushtiyindali naanu kande srushtigishane shrirangashaayi ||pa|| Entu elanu kaledudarinde bantaraivara tulidudarinde Kantakanobbana taridudarinde bantanaagi bandeno shrirangashaayi ||1|| Vana upavanagalinda ghana sarovaragalinda Kanaka gopuragalinda ghanashobhitane shrirangashaayi ||2|| Vajra vaiduryada tolegala kande prajvalipa mahaadwaarava kande N…