Haridasa Sahitya — Vyasadasa

Ishtu dayavullavana

ಇಷ್ಟು ದಯವುಳ್ಳವನ

Composer: Vadirajaru · Deity: Vishnu · Genre: Dasara Pada

Kannada lyrics

ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ ಎಷ್ಟು ನಿರ್ದಯಳೆ ನೀನು ||ಪ|| ಮುಟ್ಟುಕೋಪವ ದೂರಬಿಟ್ಟು ಸಂತೋಷದಲಿ ಕೃಷ್ಣನ ಬಳಿಗೆ ಬಾರೆ ||ಅ.ಪ|| ನಿನ್ನಲ್ಲಿ ಭೋಗಲೋಲತೆ ಇಲ್ಲದಿದ್ದರೆ ನಿನಗೆ ಪೂಮಾಲೆಯ ಕೊಡುವನೆ ಸಣ್ಣ ಕಮಲದಲೈದು ಬಣ್ಣಗಿಳಿಗಳ ಬರೆದ ಸಣ್ಣ ಸೀರೆಯ ಕೊಡುವನೆ ಕಣ್ಣಿಗೆ ಬೇಕಾದ ಕನಕಮಯ ಕರೆದು ಕೈಯಲಿ ಕೊಡುವನೆ ಬಿನ್ನಾಣವಾಡುತಲಿ ಬಗೆಬಗೆಯ ಮಾತಿನಲಿ ಬಾಯಿಮುದ್ದನೆ ಕೊಡುವನೆ ಓ ಸಖಿಯೆ ||೧|| ಕಳಿಯಡಿಕೆ ಅಲಗು ಕರ್ಪೂರ ಕಾಚನ ಗುಳಿಗೆ ಕರೆದು ಕೈಯಲಿ ಕೊಡುವನೆ ಬೆಳದಿಂಗಳಲ್ಲಿ ಶೋಭಿಸುವ ಹೊಂಬಣ್ಣದ ಬಿಳಿಯೆಲೆಯ ನಿನಗೀವನೆ ತಳಿತ ಮಾವಿನ ಚಿಗುರು ಇರುವ ರುಮಾಲೆಯ ತಲೆಯಲ್ಲಿ ಕಟ್ಟಿ ಬರುವನೆ ಥಳಿಥಳಿಪ ನವಿಲಗರಿ ಮುತ್ತಿನ ತು…

Transliteration

ishtu dayavullavana yake barabedandi eshtu nirdayale ninu ||pa|| muttukopava durabittu santoshadali krushnana balige bare ||a.pa|| ninnalli bogalolate illadiddare ninage pumaleya koduvane sanna kamaladalaidu bannagiligala bareda sanna sireya koduvane kannige bekada kanakamaya karedu kaiyali koduvane binnanavadutali bagebageya matinali bayimuddane koduvane o sakiye ||1|| kaliyadike alagu karpura ka…