Haridasa Sahitya — Vyasadasa
Irali ninnalli Bakti enage iradirali
ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
Composer: Purandara Dasaru · Deity: Hari · Genre: Ugabhoga
Kannada lyrics
ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರು ಹರಿದಾಸರನು ಯಮನೆಳೆವನೆಂಬಪಕೀರ್ತಿಯ ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ
Transliteration
Irali ninnalli Bakti enage iradirali Haridasanendenna karevaru sajjanaru Haridasaranu yamanelevanembapakirtiya Pariharisikollo sri purandara vithala