Haridasa Sahitya — Vyasadasa

Intha prabhuva kaneno

ಇಂಥಾ ಪ್ರಭುವ ಕಾಣೆನೋ

Composer: Vijaya Dasaru · Deity: Srinivasa / Venkatesha · Genre: Bhakti

Kannada lyrics

ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ||pa|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||a.pa|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ – ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಗೂಢದಿಂ ಸಂಚರಿಪ ಪಾಡಿ ಪೊಗಳಿ ಕೊಂಡಾಡುವವರ ಮುಂ- ದಾಡುತಲಿಪ್ಪನು ನಾಡೊಳಗಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ ||1|| ನಿಗಮ ತತಿಗಳರಿಯದ- ನೀರಜಭವಾ- ದ್ಯಗಣಿತ ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು ತ್ರಿಸ್ಥಾ- ನಗಳತ್ಯಜಿಸಿ ಕಲಿ ಯುಗದಿ ಭೂಮಿಗೆ ಬಂದು ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ ಜಗದೊಳು…

Transliteration

Intha prabhuva kaneno I jagadolagi0tha prabhuva kaneno Intha prabhuva kane shanta muruti jagadanta ranganu lakshmikanta sarvantaryami Bedida varava koduva bhaktara tappu nodade bandu poreva gadikaranu garudaruda Gunavanta maha praudha pratapi jagadi gudadim sancharipa Padi pogali kondaduvara mundadulippanu kadolagiddaru Kedigane nadadigalandadi idunte I venkatage||1|| Nigama tatigalariyada niraja…