Haridasa Sahitya — Vyasadasa
Intha hennina
ಇಂಥಾ ಹೆಣ್ಣಿನ
Composer: Purandara Dasaru · Deity: Lakshmi Devi · Genre: Bhakti
Kannada lyrics
ಇಂಥಾ ಹೆಣ್ಣಿನ ನಾನೆಲ್ಲ್ಯೂ ಕಾಣೆನೊ ಹೊಂತಕಾರಿ ಕಾಣಿರೋ ||ಪ|| ಸಂತತ ಸುರರಿಗೆ ಅಮೃತವನುಣಿಸಿದ ಪಂಕ್ತಿಯೊಳಗೆ ಪರವಂಚನೆ ಮಾಡಿದ ||ಅ|| ಮಂದರಗಿರಿ ತಂದು ಸಿಂಧುವಿನೊಳಗಿಟ್ಟು ಚಂದದಿ ಕಡೆದು ಅಮೃತವ ತೆಗೆದು ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ ದಂಧನಗಳ ಮಾಡಿ ದೈತ್ಯರ ವಂಚಿಸಿದ || ವಿಶ್ವಾಸದಿಂದಲಿ ಅಸುರಗೆ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ ನಸುನಗುತಲಿ ಬಂದು ಭಸ್ಮಾಸುರನಿಗೆ ಭೋಗ- ದಾಸೆಯ ತೋರಿ ಭಸ್ಮವ ಮಾಡಿದ || ವಸುಧೆಯೊಳು ಹೆಣ್ಣು ಒಸಗೆಯಾಗದ ಮುನ್ನ ಬಸಿರೊಳು ಬ್ರಹ್ಮನ ಪಡೆದವಳಿವಳು ಕುಸುಮನಾಭ ಶ್ರೀಪುರಂದರವಿಠಲನ ಪೆಸರು ಪೊತ್ತಿಹಳು ಈ ಪೊಸಕನ್ನಿಕೆಯು ||
Transliteration
Intha hennina nanelli kanenu hontakari kaniro ||pa|| Santata surarige piyusha unisida Panktiyolage paravancane madida ||a.pa|| Mandaragiri tandu sindhuvinolagittu Chandadi kadedu amrutava tegedu Indumuki ni badisendu kottare Dandhanagala madi daityara vancisida ||1|| Visvasadindali asurage varavittu Trisuladhara odi balalutire Nasunagutali bandu basmasuranige Bogadaseya tori Basmava madida ||2|| V…