Haridasa Sahitya — Vyasadasa

Innu daya barade

ಇನ್ನೂ ದಯೆ ಬಾರದೆ

Composer: Purandara Dasaru · Deity: Hari · Genre: Philosophy

Kannada lyrics

ಇನ್ನೂ ದಯೆ ಬಾರದೆ ದಾಸನ ಮೇಲೆ ಪನ್ನಂಗಶಯನ ಪಾಲ್ಗಡಲೊಡೆಯನೆ ರಂಗ ।।ಪ।। ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ಅಳಿದು ಪುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೇ ಗತಿಯೆಂದು ನಂಬಿದ ದಾಸನ ಮೇಲೆ ।।೧।। ಕಾಮಾದಿ ಷಡ್ವರ್ಗ ಗಾಢಾಂಧಕಾರದಿ ಪಾಮರನಾಗಿದ್ದ ಪಾತಕನು ಶ್ರೀಮನೋಹರನೆ ಚಿತ್ತಜ ಜನಕನೆ ನಾಮಮುದ್ರಿಕೆಯಿಂದ ನಂಬಿದ ದಾಸನ ಮೇಲೆ ।।೨।। ಮಾನಸ ವಾಚ ಕಾಯದಿ ಮಾಳ್ಪ ಕರ್ಮವು ದಾನವಾಂತಕ ನಿನ್ನಾಧೀನವಲ್ಲವೆ ಏನು ಮಾಡಿದರೇನು ಪ್ರಾಣ ನಿನ್ನದು ದೇವ ಶ್ರೀನಾಥ ಪುರಂದರವಿಠಲ ದಾಸನ ಮೇಲೆ ।।೩।।

Transliteration

Innu daye barade dasana mele Pannangasayana palgadalodeyane ranga ||pa|| Nana desagalalli nana kalagalalli Nana yonigalalli alidu putti Nanu nannadu emba narakadolage biddu Nine gatiyendu nambida dasana mele ||1|| Kamadi shadvarga gadhamdhakaradi Pamaranagidda patakanu Srimanoharane cittaja janakane Namamudrikeyimda nambida dasana mele ||2|| Manasa vaca kayadi malpa karmavu Danavantaka ninnadhinav…