Haridasa Sahitya — Vyasadasa

Innivanu iga

ಇನ್ನಿವನು ಈಗ

Composer: Sripadarajaru · Deity: Vishnu · Genre: Dasara Pada

Kannada lyrics

ಇನ್ನಿವನು ಈಗ ಬರಲಿದಕೆ ಬಗೆಯೇನು ಚೆನ್ನಾಗಿ ಪೇಳೆ ರಮಣಿ ||ಪ|| ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ ಅನ್ಯರನು ಕೂಡುವನೆ ಕೆಳದಿ ಕೆಳದಿ ||ಅ.ಪ|| ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ ಚಿನ್ನದ ಶ್ರೀರೇಖೆ ಸೀರೆ ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ ಕರ್ಪೂರ ಕಾಚಿನುಂಡೆ ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆ ಇನ್ನು ಈ ಪರಿಮಳವು ಬಗೆಬಗೆಯ ಆಭರಣ ರನ್ನ ಕೆತ್ತಿಸಿದ ಗೋಡೆ ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ ನಿನ್ನೆ ಈ ವೇಳೆ ಕೂಡಿದ ದೃಢದೆ ||೧|| ಈಗಾಗ ಬಾಹನೆಂತಿರುವೆ ತಾನೂರಿದ್ದ ಉಗುರು ಗುರುತನು ನೋಡುತ ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು ಬೇಗ ನಟನೆಯ ಮಾಡುತ ರಾಗದಿಂದ…

Transliteration

Innivanu Iga baralidake bageyenu Cennagi pele ramani ||pa|| Mannisi mamateyali manava selekondoydu Anyaranu kuduvane keladi keladi ||a.pa|| Bannada gini bareda sanna kuppasavulla Cinnada srireke sire Binnanavulla biliyele adike kenesunna Karpura kacinunde Kanniginpada kaducelva mallige mogge Unnatavada damde Innu I parimalavu bagebageya abarana Ranna kettisida gonde Munna singara madi ede hididu b…