Haridasa Sahitya — Vyasadasa

Indu vadhane paarvathiye

ಇಂದುವದನೆ ಪಾರ್ವತಿಯೆ ನಾ

Composer: Harapanahalli Bheemavvanavaru · Deity: Shiva / Rudra Devaru · Genre: Bhakti

Kannada lyrics

ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ ಬಂದೆನು ಬಾಗಿಲು ತೆಗೆಯೆ ಜಾಣೆ ಬಂದೆನು ಬಾಗಿಲು ತೆಗೆಯೆ || ಬಂದವರ್ಯಾರೀ ವ್ಯಾಳ್ಯದಿ ಬಾಗಿಲು ಬಂದು ತೆಗೆಯೊರ್ಯಾರಿಲ್ಲ ಈಗ ಬಂದು ತೆಗೆಯೊರ್ಯಾರಿಲ್ಲ || ಅಂಗನಾಮಣಿ ಕೇಳೆ ಗಂಗಾಧರೆನಿಸಿದ ಚಂದ್ರಶೇಖರ ನಾ ಬಂದೀನೆ ಜಾಣೆ ಚಂದ್ರಶೇಖರ ನಾ ಬಂದೀನೆ || ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ ಬಂದ ಕಾರಣವೇನು ನೀನು ಅವ ರಿಂದ ಕಾರಣ ಮತ್ತೇನು || ಕುಸುಮಲೋಚನೆ ಕೇಳೆ ಪಶುಪತಿ ನಾ ಬಂದೆ ಕುಶಲದಿ ಬಾಗಿಲು ತೆಗೆಯೆ ಜಾಣೆ ಕುಶಲದಿ ಬಾಗಿಲು ತೆಗೆಯೆ || ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು ಹಸನಾಗಿ ತೋರಿಸೊ ಎನಗೆ ಕೊಂಬು ಹಸನಾಗಿ ತೋರಿಸೊ ಎನಗೆ || ಸರ್ವಶರೀರದಲ್ಲೆತ್ತಿಕೊಂಡಿರುವಂಥ ಶ್ರೇಷ್ಠ…

Transliteration

Induvadane parvatiye na illigebandenu Bagilu tegeye jane Bandenu bagilu tegeye ||1|| Bandavaryari vyalyadi bagilu Bandu tegeyoryarilla Iga Bandu tegeyoryarilla ||2|| Anganamani kele gangadharenisida Chandrasekara na bandine jane Chandrasekara na bandine ||3|| Sindhurajana satisutaranhottillige Banda karanavenu ninu ava Rinda karana mattenu ||4|| Kusumalochane kele pasupati na bande Kusaladi bagilu…