Haridasa Sahitya — Vyasadasa
Indu ennanu bandu
ಇಂದು ಎನ್ನನು ಬಂದು
Composer: Haridasa · Deity: Raghavendra Teertharu · Genre: Dasara Pada
Kannada lyrics
ಇಂದು ಎನ್ನನು ಬಂದು ರಕ್ಷಿಸೋ ತಂದೆ ಗುರುರಾಘವೇಂದ್ರನೇ ಮಂದಮತಿ ನಾ ಮನದಿ ಮಾಡುವ ಕುಂದುಗಳ ನೀನೆಣಿಸದೆ || ಪ || ಭಕ್ತಿ ಕರ್ಮ ವಿರಕ್ತಿಯನು ಮಾಡಿ ಭಕ್ತಜನ ನಿನ್ನ ಸಂಗದೊಳು ನಲಿದು ಉಕ್ತಿವಂದನ ನುಡಿದು ಪರಮಾಸಕ್ತಿಯಿಂದ ಪಾಡುತ ತ್ಯಕ್ತಿಸಿ ವಿಷಯಾಂಬುಧಿಯನು ಮುಕ್ತಿದಾತನ ನಾಮ ಮುಂಕೊಂಡು ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತ ನೀನೆಂದು ನಂಬಿದೆ || ೧ || ವಾರ್ತೆ ನುಡಿ ಸರಿ ಕೀರ್ತಿ ಪುರುಷನೆ ಆರ್ತನಾಗಿ ಆಚರಿಪ ಜಗ ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃಮಾತೃ ಪಿತೃಬಒಧುವೆ ಪೂರ್ತಿಸದೊ ಮನ ಸ್ತೋತ್ರ ಮಾಡಲು ತೀರ್ಥತುಂಗತೀರವಾಸನೆ ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ || ೨ || ಕರವಪಿಡಿ ಜ್ಞಾನಕಾಮಧೇನುವೆ…
Transliteration
Indu ennanu bandu rakshiso Tande gururaghavendrane Mandamati na manadi maduva Kundugala ninenisade || pa || Bakti karma viraktiyanu madi Baktajana ninna sangadolu nalidu Uktivandana nudidu paramasaktiyinda paduta Tyaktisi vishayambudhiyanu Muktidatana nama munkondu Yuktiyindacarisadale salaho Sakta ninendu nambide || 1 || Varte nudi sari kirti purushane Artanagi Acharipa jaga Parthasakanapara tamt…