Haridasa Sahitya — Vyasadasa
Illentha sukagalunto allantha sukagaluntu
ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು
Composer: Purandara Dasaru · Deity: Hari · Genre: Ugabhoga
Kannada lyrics
ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು ದುಃಖಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ ಪ್ರಾಕೃತವಾದ ಸುಖವನನುಭವಿಸುತ್ತ ಕ್ರಮದಿ ತಿರುಗುವರು ಆಂದೋಳಿಕ ಛತ್ರಚಾಮರ ಸದಾ ಪೀತಾಂಬರ ಶಂಖಚಕ್ರಗಳಿಂದೊಪ್ಪುತ ಗುರು ಪುರಂದರವಿಠಲನ ಭಜಿಸು ಜೀವ ||
Transliteration
Illentha sukagalunto allantha sukagaluntu Duhkamisravada suka ihalokadallippudu nasavuntu Dinakondu bagebageyadantha sukavagi nasavillada Prakrutavada sukavananubavisutta kramadi tiruguvaru Andolika catracamara sada pitambara sankacakragalindopputa Guru purandaravithalana Bajisu jiva ||