Haridasa Sahitya — Vyasadasa
Ikko node ranganathana
ಇಕ್ಕೋ ನೋಡೆ ರಂಗನಾಥನ
Composer: Sripadarajaru · Deity: Vishnu · Genre: Dasara Pada
Kannada lyrics
ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ ||ಪ|| ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ|| ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವ ಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವ ಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವ ಸಂಕಟಹರಣ ವೆಂಕಟೇಶನ ದಿವ್ಯ ಪಾದವ ||೧|| ಲಲನೆ ಲಕ್ಷ್ಮಿಯಂಕದಲ್ಲಿ ನಲಿಯುವ ಪಾದವ ಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವ ಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವ ಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ||೨|| ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ ಬಂಡಿಲಿದ್ದ ಶಕಟಾಸುರನ ಒದ್ದ ಪಾದವ ಅಂಡಜ ಹನುಮರ ಭುಜದೊಳೊಪ್ಪುವ ಪಾದವ ಕಂಡೆವೆ ಶ್ರೀರಂಗವಿಠಲನ ದಿವ್ಯಪಾದವ ||೩||
Transliteration
Ikko node ranganathana cikkapadava || pa. || Sikkite srilakshmipatiya divyapadava || a.pa. || Sanka chakra gada padma ankita padava Ankusa kulisa dhvajareka ankita padava Pankajasanana hrudayadalli naliyuva padava Sankataharana venkatesana divya padava || 1 || Lalane lakshmiyankadalli naliyuva padava Jalajasanana abishtavella nalisuva padava Mallara gelidu kansasurana konda padava Baliya metti bag…