Haridasa Sahitya — Vyasadasa
Ikkalare kai enjalu , cikka
ಇಕ್ಕಲಾರೆ ಕೈ ಎಂಜಲು , ಚಿಕ್ಕ
Composer: Purandara Dasaru · Deity: Hari · Genre: Philosophy
Kannada lyrics
ಇಕ್ಕಲಾರೆ ಕೈ ಎಂಜಲು , ಚಿಕ್ಕ ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ|| ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯ ತನಯರು ಅಳುತಾರೆ , ನಿನದೇನು ಕಾಟವು ಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ || ಅಟ್ಟದ ಮೇಲಣ ಅಕ್ಕಿ ತೆಗೆಯಬೇಕು ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ ನಿಷ್ಠುರ ಮಾಡದೆ ಹೋಗೋ ದಾಸಯ್ಯ || ವೀಸದ ಕಾಸಿಗೆ ದವಸವ ನಾ ತಂದೆ ಕೂಸಿಗೆ ಸಾಲದು , ಹೋಗೋ ದಾಸಯ್ಯ ಆಸೆಕಾರ ನೀನು , ದೋಷಕಾರಿ ನೀನು ಶೇಷಾಚಲವಾಸ ಪುರಂದರವಿಠಲ ||
Transliteration
Ikkalare kai enjalu , cikka Makkalu alutare hogo dasayya ||pa|| Maneya sarisutene , madake toleyutene Maneya toleyolagarilla , hogo dasayya Tanayaru alutare , ninadenu katavu Kshana hottu nillade, hogo dasayya || Attada melana akki tegeyabeku Hotte noyutalide, hogo dasayya Muttagi iddene , maneyolagarilla Nishthura madade hogo dasayya || Visada kasige davasava na tande Kusige saladu , hogo dasayya…