Haridasa Sahitya — Vyasadasa
Idu ninage dharmave
ಇದು ನಿನಗೆ ಧರ್ಮವೇ
Composer: Jagannatha Dasaru · Deity: Vishnu · Genre: Dasara Pada
Kannada lyrics
ಇದು ನಿನಗೆ ಧರ್ಮವೇ ಇಂದಿರೇಶ ಬದೆಗ ನೀನಾಗಿದ್ದು ಭೀತಿಪಡಿಸುವುದು ।।ಪ।। ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿ ನಿನ್ನವರ ಪ್ರೀತಿಯನು ಸಂಪಾದಿಸಿ ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ ಮಾನವನ ಈ ಪರಿಯ ಬನ್ನಬಡಿಸುವುದು ।।೧।। ದುರುಳನಲ್ಲವೊ ನಿನ್ನ ಚರಸೇವಕರವನೊ ಪರಿಪಾಲಿಸುವುದು ನಿನಗೆ ಪರಮಧರ್ಮ ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ ಶರಣರ ಪಾಲಕನೆಂಬ ಬಿರುದು ಸುಳ್ಳಾಗುತಿದೆ ।।೨।। ಶೋಕನಾಷಣ ವಿಗತಶೋಕನೆಂಬೊ ನಾಮ ನಾ ಕೇಳಿ ಮರೆಹೊಕ್ಕೆ ಲೋಕಬಂಧು ನೀಕರಿಸೆಮ್ಮ ನೀ ಸಾಕಬೇಕನುದಿನವು ವಾಕು ಮನ್ನಿಪುದು ಲೋಕೈಕರಕ್ಷಾಮಣಿ ।।೩।। ಗುಣವೇ ನಿನ್ನದು ಬರಿದೆ ದಣಿಸುವುದು ಶರಣರನು ಪ್ರಣತಾರ್ತಿಹರ ವಿಭೀಷಣಪಾಲಕ ಕ್ಷಣಕನಂ…
Transliteration
Idu ninage dharmave indiresa Badega ninagiddu bitipadisuvudu ||pa|| Ninna gunagala tutisi ninnane haraisi Ninnavara pritiyanu sampadisi Anyaranu lekkisade chennagi baluva Manavana I pariya bannabadisuvudu ||1|| Durulanallavo ninna carasevakaravano Paripalisuvudu ninage paramadharma Gurugalantaryami karamugidu binnaipe Saranara palakanemba birudu sullagutide ||2|| Sokanashana vigatasokanembo nama N…