Haridasa Sahitya — Vyasadasa

Idu Eno charita yantroddhara

ಇದು ಏನೊ ಚರಿತ ಯಂತ್ರೋದ್ಧಾರ

Composer: Gopala Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಇದು ಏನೊ ಚರಿತ ಯಂತ್ರೋದ್ಧಾರ ||pa|| ಇದು ಏನೊ ಚರಿತ ಶ್ರೀಪದುಮನಾಭನ ದೂತಸದಾ ಕಾಲದಲಿ ಸರ್ವರ ಹೃದಯಾಂತರ್ಗತ ||a.pa|| ವಾರಿಧಿ ಗೋಷ್ಪಾದನೀರಂತೆ ದಾಟಿದಧೀರ ಯೋಗಾಸನಧಾರಿಯಾಗಿಪ್ಪೊದು || ದುರುಳ ಕೌರವರನ್ನು ವರಗದೆಯಲಿ ಕೊಂದಕರದಲ್ಲಿ ಜಪಮಾಲೆ ಧರಿಸಿ ಎಣಿಸುವುದು|| ಹೀನ ಮತಗಳನ್ನು ವಾಣಿಲಿ ತರಿದಂಥe್ಞÁನವಂತನೆ ಹೀಗೆ ಮೌನವ ಧರಿಸಿದ್ದು || ಸರ್ವವ್ಯಾಪಕ ನೀನು ಪೂರ್ವಿಕ ದೇವನೆಶರ್ವನಪಿತ ಬಂದೀ ಪರ್ವತ ಸೇರಿದ್ದು || ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯುವ್ಯಾಪಾರ ಮಾಡದೆ ಈ ಪರಿ ಕುಳಿತದ್ದು ||

Transliteration

Idu Eno charita yantroddhara ||pa|| Idu Eno carita sripadumanabana dutasada kaladali sarvara hrudayantargata ||a.pa|| Varidhi goshpadanirante datidadhira yogasanadhariyagippodu || Durula kauravarannu varagadeyali kondakaradalli japamale dharisi enisuvudu|| Hina matagalannu vanili taridanthae jnanavantane hige maunava dharisiddu || Sarvavyapaka ninu purvika devanesarvanapita bandi parvata seriddu |…