Haridasa Sahitya — Vyasadasa

Idu enesoda dadhiya damodara

ಇದು ಏನೆಶೋದಾ

Composer: Harapanahalli Bheemavvanavaru · Deity: Krishna / Govinda / Mukunda · Genre: Bhakti

Kannada lyrics

ಇದು ಏನೆಶೋದಾ ಇದು ಏನೆಶೋದಾ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ।।ಪ।। ಕೊಳಲನೂದುತಿರೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆ ಸುತ್ತ ಕುಣಿದಾಡುವುದು ।।೧।। ವತ್ಸ ಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು ।।೨।। ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ‍್ಹಿಂದ್ಹಿಂದೆ ತಿರುಗುವುದು ।।೩।। ವತ್ಸನಂದದಲಿ ಬಾಯ್‍ಹಚ್ಚಿ ಗೋವಿನ ಕ್ಷೀರವ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ ।।೪।। ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡನತಿ ದುಷ್ಟೆನ್ನ ಕೊಲ್ಲುವನಮ್ಮ ।।೫।। ಮೌನಗೌರಿಯ ನೋಟು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು ।।೬।। ಬ್ಯಾಡೋ ಕೃಷ್ಣನೆ ಬಟ್ಟೆ ನೀಡೆಂದಾಲ್ಪರ…

Transliteration

Idu enesoda Idu enesoda dadhiya damodara Hedarikillade kudidodi ta poda ||pa|| Kolalanudutire akalane kayutalhogi Kalala gadige sutta kunidaduvudu ||1|| Vatsa kayuta vanadolage adendare Kiccunumgi sarpava tuliyuvudu ||2|| Chendanaduta turuvhindu kayendare Gandanullavar^hind~hinde tiruguvudu ||3|| Vatsanandadali bay^hacci govina kshirava Ashtu kudidanascarya nodamma ||4|| Indenna maneyallondishtu k…