Haridasa Sahitya — Vyasadasa

Idu bagya idu bagya idu bagyavayya

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ

Composer: Purandara Dasaru · Deity: Hari · Genre: Bhakti

Kannada lyrics

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದಭಜನೆ ಸುಖವಯ್ಯ||pa|| ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ಬಿಲ್ಲಾಗಿ ಇರಬೇಕು ಬಲ್ಲವರೊಳು ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧುಜನರೊಳಗೆ||1|| ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ ಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕು ಶುದ್ಧನಾಗಿರಬೇಕು ಕರಣತ್ರಯಂಗಳಲಿ||2|| ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕು ನಿಶಿ ಹಗಲು ಶ್ರೀಹರಿಯ ಭಜಿಸಬೇಕು ವಸುಧೆಯೊಳು ಪುರಂದರವಿಠಲನ ನಾಮವ ಹಸನಾಗಿ ನೆನೆನೆನೆದು ಸುಖಿಯಾಗಬೇಕು||3||

Transliteration

Idu bagya idu bagya idu bagyavayya Padumanabana padabajane sukavayya||pa|| Kallagi irabeku kathina bavatoreyolage Billagi irabeku ballavarolu Mellane madhavana manadi meccisabeku Bellavagirabeku bandhujanarolage||1|| Buddhiyali tanumanava tiddikolutirabeku Muddagi irabeku muni yogigalige Madhva matabdhiyali minagi irabeku Suddhanagirabeku karanatrayangalali||2|| Vishayabogada trunake uriyagi irabe…