Haridasa Sahitya — Vyasadasa

Idhu yenyashodhe

ಇದು ಏನೆ

Composer: Haridasa · Deity: Vishnu · Genre: Dasara Pada

Kannada lyrics

ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ||pa|| ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು ||1|| ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು ||2|| ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು ||3|| ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ ||4|| ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ ||5|| ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು ||6|| ಬ್ಯಾಡೊ ಕೃಷ್ಣನೆ ಬಟ್ಟೆ ನೀಡ…

Transliteration

Idu enesoda idu enesoda dadhiya damodara Hedarikillade kudidodi ta poda ||pa|| Kolalanudutire akalane kayutalhogi Kalala gadige sutta kunidaduvudu ||1|| Vatsa kayuta vanadolage adendare Kiccunungi sarpava tuliyuvudu ||2|| Chendanaduta turuvhindu kayendare Gandanullavar^hind~hinde tiruguvudu ||3|| Vatsanandadali bay^hacci govina kshirava Ashtu kudidanascarya nodamma ||4|| Indenna maneyallondishtu k…