Haridasa Sahitya — Vyasadasa
Ideko dhadi mathise
ಇದೆಕೋ ಧದಿ ಮಥಿಸೆ
Composer: Prasanna Venkata Dasaru · Deity: Krishna · Genre: Dasara Pada
Kannada lyrics
ಇದೆಕೋ ಧದಿ ಮಥಿಸೆ ಹಸೆ ಬೆಣ್ಣೆ ಕೊಡವೇನೊ ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ ||ಪ|| ಮಲತಹಾಲು ಹುಳಿಮೊಸರು ತಂಗಳಬೆಣ್ಣೆ ನಳಿನಾಕ್ಷ ನಿನಗೇನು ರುಚಿಯೋ ಕಂದಾ ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ ಗೆಳೆತನವ್ಯಾತಕೊ ನಿನಗೆ ರಂಗಮ್ಮಾ ||೧|| ಮನೆಮನೆ ತಿರುಗಾಡಲು ಬಡವರ ಮಗನೇನೋ ನಿನಗೇನು ಕೊರತೆನ್ನಾ ಮನೆಯೊಳಗೆ ಅನುದಿನಾ ವಿಗಡೇರು ದೂರುತಲೈದಾರೆ ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ ।।೨।। ಎನ್ನ ಮುದ್ದಿನ ಅಮೃತ ಎನ್ನ ಭಾಗ್ಯದ ನಿಧಿಯೆ ಎನ್ನ ಚಿಂತನೆಯ ಚಿಂತಾಮಣಿಯೇ ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ ।।೩।।
Transliteration
Ideko dhadi mathise hase benne kodaveno Padumanaba gollagorasake golidabyado ||pa|| Malatahalu hulimosaru tangalabenne Nalinaksha ninagenu ruciyo kanda Kalavina matyake hasule govaleyera Geletanavyatako ninage ramgamma ||1|| Manemane tirugadalu badavara maganeno Ninagenu koratenna maneyolage Anudina vigaderu durutalaidare Danidenaropaniya keli krushnayya ||2|| Enna muddina amruta enna bagyada nidh…