Haridasa Sahitya — Vyasadasa

Ide paalisu ide paalisu

ಇದೇ ಪಾಲಿಸು ಇದೇ ಪಾಲಿಸು

Composer: Gopala Dasaru · Deity: Hari · Genre: Philosophy

Kannada lyrics

ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ| ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು||pa|| ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ ಜೀವ ಜಡರೆಲ್ಲ ದೇವರಾಧೀನವೆಂದು| ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||1|| ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ| ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||2|| ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು ಸಂದೇಹದಿಂದ ನಾ ಕೇಳಲಿಲ್ಲ| ಸುಂದರಮೂರುತಿ ಗೋಪಾಲವಿಠ್ಠಲ ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||3||

Transliteration

Ide palisu ide palisu ide palisayya| Paduma sambava pitane padopadige emagindu|| Jiva asvatantrya deva nija svatantrya Jiva jadarella devaradhinavemdu| Jivottamarali Bakuti jadadalli virakuti Kava kolluvudella srihari emba j~jana||1|| Bimba calisidare pratibimba calisuvudu Bimba purnanu pratibimbanu alpa| Umbuduva kriyegalanu bimba madisalu Pratibimbakyavuntemba bimbakriyavu enage||2|| Bandhana ni…