Haridasa Sahitya — Vyasadasa
Idarimbittinnillemba mahavyadhi barali ma-
ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ ಮ-
Composer: Purandara Dasaru · Deity: Hari · Genre: Ugabhoga
Kannada lyrics
ಇದರಿಂಬಿಟ್ಟಿನ್ನಿಲ್ಲೆಂಬ ಮಹಾವ್ಯಾಧಿ ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಭೀತಿ ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾಬಾಧೆ ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಮಹಾ ಆಪತ್ತು ಬರಲಿ ಮ- ತ್ತಿದರಿಂಬಿಟ್ಟಿನ್ನಿಲ್ಲೆಂಬ ಅದಕೊಂದಿದ- ಕ್ಕೊಂದು ಯೋಚಿಸಬೇಡಿ ಕಾಣಿರೊ ಮ- ತ್ತದಕೊಂದಿದಕೊಂದು ಯೋಚಿಸಬೇಡಿ ಕಾಣಿರೊ ಪುರಂದರವಿಠಲ ತನ್ನ ನಂಬಿದವರ ಹಿಂದ್ಹಾಕಿಕೊಂಬ ಕಾಣಿರೊ
Transliteration
Idarimbittinnillemba mahavyadhi barali ma- Ttidarimbittinnillemba mahabiti barali ma- Ttidarimbittinnillemba mahabadhe barali ma- Ttidarimbittinnillemba maha Apattu barali ma- Ttidarimbittinnillemba adakondida- Kkondu yocisabedi kaniro ma- Ttadakondidakondu yocisabedi kaniro Purandara vittalatanna nambidavara hind~hakikomba kaniro