Haridasa Sahitya — Vyasadasa

Idarimbittenilyemba mahavyadhi barali , ma-

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ-

Composer: Purandara Dasaru · Deity: Hari · Genre: Ugabhoga

Kannada lyrics

ಇದರಿಂಬಿಟ್ಟೆನಿಲ್ಯೆಂಬ ಮಹಾವ್ಯಾಧಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಭೀತಿ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾಬಾಧೆ ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಮಹಾ ಆಪತ್ತು ಬರಲಿ , ಮ- ತ್ತಿದರಿಂಬಿಟ್ಟೆನಿಲ್ಯೆಂಬ ಅದಕೊಂದಿದಕೊಂದ್ಯೋಚಿಸಬೇಡಿ ಕಾಣಿರೊ, ಮ ತ್ತದಕೊಂದಿದಕೊಂದ್ಯೋಚಿಸಬೇಡಿ ಕಾಣಿರೊ ಪುರಂದರವಿಠಲ ತನ್ನ ನಂಬಿದವರ ಹಿಂದ್ಹಾಕಿಕೊಂಬ ಕಾಣಿರೊ ||

Transliteration

Idarimbittenilyemba mahavyadhi barali , ma- Ttidarimbittenilyemba mahabiti barali , ma- Ttidarimbittenilyemba mahabadhe barali , ma- Ttidarimbittenilyemba maha Apattu barali , ma- Ttidarimbittenilyemba adakondidakondyocisabedi kaniro, ma Ttadakondidakondyocisabedi kaniro Purandara vittalatanna nambidavara hind~hakikomba kaniro ||