Haridasa Sahitya — Vyasadasa
Idanaadaru dayapaalisadire
ಇದನಾದರು ಕೊಡದಿದ್ದರೆ
Composer: Sripadarajaru · Deity: Vishnu · Genre: Dasara Pada
Kannada lyrics
ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ||ಪ|| ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ ಬೇಸರಿಸಿ ಬೇಡ ಬಂದುದಿಲ್ಲ ವಾಸುದೇವನೆ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕೆಂದರೆ ||೧|| ಸತಿಸುತರುಗಳ ಸಹಿತನಾಗಿ ನಾ ಹಿತದಿಂದ ಇರಬೇಕೆಂಬೊದಿಲ್ಲ ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತವನೆ ಕೊಡು ಸಾಕೆಂದರೆ ||೨|| ಸಾಲವಾಯಿತು, ಸಂಬಳ ಎನಗೆ ಸಾಲದೆಂದು ಬೇಡ ಬಂದುದಿಲ್ಲ ನಾಲಗೆಯಲಿ ನಿನ್ನ ನಾಮದುಚ್ಚರಣೆಯ ಪಾಲಿಸಬೇಕೆಂದು ಬೇಡಿದೆನಲ್ಲದೆ ||೩|| ಒಡವೆ ಒಡ್ಯಾಣಗಳಿಲ್ಲೆಂದು ಬಡವನೆಂದು ಬೇಡಬಂದುದಿಲ್ಲ ಒಡೆಯ ನಿನ್ನಡಿಗಳಿಗೆರಗುವುದಕೆ ಮನ ಬಿಡದಿಹದೊಂದನು ಕೊಡು ಸಾಕೆಂದರೆ ||೪|| ಆಗಬೇಕು ರಾಜ್ಯಭೋಗಗಳ…
Transliteration
Idanaadaru dayapaalisadire | ninna padakamalava nambi bhajisuvadento || pa || Graasagalige illavendu ninna besattu beda bandudilla || vaasudevane ninna daasara daasara, daasyava kodu saakendare || 1 || Odavegalilla odyaanagalillendu | badava ninnadige beda bandudilla || odeya ninnadigaligeraguvadake mana | vidutihadondanu kodu saakendare || 2 || Sati sutarugalinda sahitavaagi naanu | hitadallirabe…