Haridasa Sahitya — Vyasadasa
I pariya sobagava devarali kane
ಈ ಪರಿಯ ಸೊಬಗಾವ ದೇವರಲಿ ಕಾಣೆ
Composer: Purandara Dasaru · Deity: Hari · Genre: Bhakti
Kannada lyrics
ಈ ಪರಿಯ ಸೊಬಗಾವ ದೇವರಲಿ ಕಾಣೆ ।।ಪ।। ಗೋಪೀಜನಪ್ರಿಯ ಗೋಪಾಲಗಲ್ಲದೆ ।।ಅ.ಪ।। ದೊರೆಯತನದಲ್ಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ ಗುರುವುತನದಲಿ ನೋಡೆ ಜಗದಾದಿಗುರುವು ।।೧।। ಪಾವನತ್ವದಿ ನೋಡೆ ಅಮರಗಂಗಾಜನಕ ದೇವತ್ವದಲಿ ನೋಡೆ ದಿವಿಜರೊಡೆಯ ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ ಆವಾ ಧೈರ್ಯದಿ ನೋಡೆ ಲೋಕಮೋಹಕನಯ್ಯ ।।೨।। ಗಗನದಲಿ ಸಂಚರಿಪ ಗರುಡದೇವನೆ ತುರುಗ ಜಗತೀಧರ ಶೇಷ ಪರಿಯಂಕ ಶಯನ ನಿಗಮಗೋಚರ ಪುರಂದರವಿಠಲಗಲ್ಲದೆ ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ ।।೩।।
Transliteration
I pariya sobagava devarali kane ||pa|| Gopijanapriya gopalagallade ||a.pa|| Doreyatanadalli node dharanidevige ramana Siriyatanadali node srikantanu Hiriyatanadali node sarasijodbavanayya Guruvutanadali node jagadadiguruvu ||1|| Pavanatvadi node amaragangajanaka Devatvadali node divijarodeya Lavanyadali node lokamohakanayya Ava dhairyadi node lokamohakanayya ||2|| Gaganadali samcaripa garudadevane…