Haridasa Sahitya — Vyasadasa

Ee pariya sobagava

ಈ ಪರಿಯ ಸೋಬಗವ

Composer: Purandara Dasaru · Deity: Hari · Genre: Bhakti

Kannada lyrics

ಈ ಪರಿಯ ಸೋಬಗವ ದೇವರಲಿ ನಾ ಕಾಣೆ | ಗೋಪಿಜನಪ್ರಿಯ ಗೋಪಾಲಗಲ್ಲದೆ || PA || ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ | ಸಿರಿಯತನದಲಿ ನೋಡೆ ಶ್ರೀಕಾಂತನು || ಹಿರಿಯತನದಲಿ ನೋಡೆ ಸರಸಿಜೊದ್ಭವನಯ್ಯ | ಗುರುವುತನದಲಿ ನೋಡೆ ಜಗದಾದಿ ಗುರುವು || 1 || ಪಾವನತ್ವದಿ ನೋಡೆ ಅಮರ ಗಂಗಾಜನಕ | ದೇವತ್ವದಲಿ ನೋಡೆ ದಿವಿಜರೊಡೆಯ || ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ | ಆವ ಧೈರ್ಯದಿ ನೋಡೆ ಅಸುರಾಂತಕ || 2 || ಗಗನದಲಿ ಸಂಚರಿಪ ಗರುಡದೇವನೆ ತುರಗ | ಜಗತೀಧರ ಶೇಷ ಪರಿಯಂಕ ಶಯನ || ನಿಗಮಗೋಚರ ಪುರಂದರ ವಿಠಲಗಲ್ಲದೇ | ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೇ? || 3 ||

Transliteration

Ee pariya sobagava devarali kane ||pa|| Gopijanapriya gopalagallade ||a.pa|| Doreyatanadalli node dharanidevige ramana Siriyatanadali node srikamtanu Hiriyatanadali node sarasijodbavanayya Guruvutanadali node jagadadiguruvu ||1|| Pavanatvadi node amaragamgajanaka Devatvadali node divijarodeya Lavanyadali node lokamohakanayya Ava dhairyadi node lokamohakanayya ||2|| Gaganadali sancaripa garudadevan…