Haridasa Sahitya — Vyasadasa

Hyange bareditto

ಹ್ಯಾಂಗೆ ಬರೆದಿತ್ತೊ

Composer: Purandara Dasaru · Deity: Hari · Genre: Philosophy

Kannada lyrics

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ ಹಾಂಗೆ ಇರಬೇಕು ಸಂಸಾರದಲ್ಲಿ ||ಪ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಅದು ಹಾರಿಹೋದಂತೆ ||೧|| ಸಂತೆ ನೆರೆಯಿತು ನಾನಾ ಪರಿ ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ ||೨|| ಆಡುವ ಮಕ್ಕಳು ಮನೆಯ ಕಟ್ಟಿದರು ಆಟ ಸಾಕೆಂದು ಮುರಿದೋಡಿದರು ||೩|| ವಸತಿಕಾರನು ವಸತಿಗೆ ಬಂದಂತೆ ಹೊತ್ತಾರೆದ್ದು ಹೊರಟು ಹೋದಂತೆ ||೪|| ಸಂಸಾರ ಪಾಶವ ನೀನೇ ಬಿಡಿಸಯ್ಯ ಕಂಸಾರಿ ಪುರಂದರವಿಠ್ಠಲರಾಯ ||೫||

Transliteration

Hyange bareditto pracinadalli Hange irabeku samsaradalli ||pa|| Pakshi angaladalli bandu kutante A kshanadalli adu harihodante ||1|| Sante nereyitu nana pari Tirugi hidiyitu tamma tamma dari ||2|| Aduva makkalu maneya kattidaru Ata sakendu muridodidaru ||3|| Vasatikaranu vasatige bandante Hottareddu horatu hodante ||4|| Samsara pasava nine bidisayya Kamsari purandaraviththalaraya ||5||