Haridasa Sahitya — Vyasadasa
Huva taruvara manege
ಹೂವ ತರುವರ ಮನೆಗೆ
Composer: Purandara Dasaru · Deity: Hari · Genre: Philosophy
Kannada lyrics
ಹೂವ ತರುವರ ಮನೆಗೆ ಹುಲ್ಲ ತರುವ ಅವ್ವೆ ಲಕುಮೀರಮಣ ಇವಗಿಲ್ಲ ಗರುವ ||ಪ|| ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ ಎಂದೆಂದು ವಾಸಿಪನಾ ಮಂದಿರದೊಳಗೆ ||೧|| ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ ಪರಿಪೂರ್ಣನೆಂದು ಪೂಜೆಯನು ಮಾಡೆ ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ ಸರಿಭಾಗ ಕೊಡುವ ತನ್ನರಮನೆಯ ಒಳಗೆ ||೨|| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲ ತಂದ ಅಂಡಜಾಧಿಪ ನಮ್ಮ ಪುರಂದರವಿಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||೩||
Transliteration
Huva taruvara manege hulla taruva Avve lakumiramana ivagilla garuva ||pa|| Ondu dala sri tulasi bindu gangodakava Indira ramana garpitavennalu Onde manadali sindhusayana mukundayene Endendu vasipana mamdiradolage ||1|| Paripariya pushpagala paramatmagarpisi Paripurnanemdu pujeyanu made Sarasijakshanu tanna sakala svatantryadali Saribaga koduva tannaramaneya olage ||2|| Pandavara maneyolage kudureg…