Haridasa Sahitya — Vyasadasa

Huva mudisida svami

ಹೂವ ಮುಡಿಸಿದ ಸ್ವಾಮಿ

Composer: Harapanahalli Bheemavvanavaru · Deity: Hari · Genre: Bhakti

Kannada lyrics

ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ ಭಾಮೇರಿಬ್ಬರಿಗೆ ರಂಗಯ್ಯ ||pa|| ಬಂದು ರುಕ್ಮಿಣಿ ಭಾಮೇರಿಂದತಿ ಸಂಭ್ರಮ್ಮದಿಂದ ರಂಗಯ್ಯ ಕುಂದಣದ ಹಸೆಮ್ಯಾಲೆ ಕುಳಿತಿರೆ ಚೆಂದದಲಿ ನಗುತ ಚಂದ್ರವದನ ತಾ ಚತುರ್ಭುಜದಿಂದಲಿ ಅಂಗನೆಯರ ಆಲಿಂಗನೆ ಮಾಡುತ ||1|| ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ ನೋಡಿ ನಗುತ ರಂಗಯ್ಯ ಸಾರಸಮುಖಿ ಸಹಿತ ಸರಸ- ವಾಡುತ ನಾರದರು ನಮ್ಮಿಬ್ಬರ ಕದನಕೆ ಹೂಡಿದರೆ ಹುಚ್ಚಾದಿರೆಂದೆನುತ ||2|| ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ ಕಲ್ಲಾ ್ಹರದ ಕಮಲ ರಂಗಯ್ಯ ಒಳ್ಳೆ ತಾವರೆ ಅರಳು ಮೊಗ್ಗುಗಳು ಝಲ್ಲೆ ಕುಸುಮಗಳು ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ- ಮೇಶ ಕೃಷ್ಣ ರುಕ್ಮಿಣಿಗೆ ||3||

Transliteration

hUva muDisida svAmi rukmiNi BAmEribbarige rangayya ||pa|| bandu rukmiNi BAmErindati saMBrammadinda rangayya kundaNada hasemyAle kuLitire cendadali naguta chanravadana tA caturBujadindali anganeyara Alingane mADuta ||1|| hUva muDisuta vArijAkShEra vArenOTadi nODi naguta rangayya sArasamuKi sahita sarasa- vADuta nAradaru nammibbara kadanake hUDidare huccAdirendenuta ||2|| malle malligemoggu SAvantig…