Haridasa Sahitya — Vyasadasa

Huccu hidiyitu enage

ಹುಚ್ಚು ಹಿಡಿಯಿತು ಎನಗೆ,

Composer: Purandara Dasaru · Deity: Hari · Genre: Philosophy

Kannada lyrics

ಹುಚ್ಚು ಹಿಡಿಯಿತು ಎನಗೆ, ಹುಚ್ಚು ಹಿಡಿಯಿತು ||ಪ|| ಅಚ್ಯುತನ ಧ್ಯಾನವೆಂಬೊ ಅಚ್ಚುಮೆಚ್ಚು ತಲೆಗೆ ಏರಿ ||ಅ || ವಾಸುದೇವನೆಂಬ ನಾಮ ವದನದಲ್ಲಿ ಒದರುವೆ, ಮಾಯಾ ಪಾಶವೆಂಬೊ ಅಂಗಿಯನ್ನು ಹರಿದು ಹರಿದು ಹಾಕುವೆ ಕೇಶವನ ಹುವ್ವ ಮುಡಿದು ಕುಣಿದು ಕುಣಿದು ಆಡುವೆ, ಕೆಟ್ಟ ದೋಷವೆಂಬೊ ಗೊಡೆಯನ್ನು ಕೆದರಿ ಕೆದರಿ ಹಾಕುವಂಥ || ಕೃಷ್ಣನಂಘ್ರಿಕಮಲದಲ್ಲಿ ಸೊರಗಿ ಬೀಳುವೆ, ಭವ ಕಷ್ಟವೆಂಬೊ ಕುಂಭವನ್ನು ಒಡೆದು ಒಡೆದು ಹಾಕುವೆ ನಿಷ್ಟರನ್ನು ಕಂಡು ಅವರ ಹಿಂದೆ ಹಿಂದೆ ತಿರುಗುವೆ, ಕಡು ದುಷ್ಟರನ್ನು ಕಂಡು ನಾನು ಕಲ್ಲು ಕಲ್ಲು ಬೀರುವಂಥ || ಮಂದಮತಿಗಳನ್ನು ಕಂಡು ಮೂಕನಾಗಿ ಇರುವೆ, ಹರಿಯ ನಿಂದೆ ಮಾಡಿದವನ ಮೇಲೆ ಮಣ್ಣು ಮಣ್ಣು ಚೆಲ್ಲುವೆ…

Transliteration

Huccu hidiyitu enage, huccu hidiyitu ||pa|| Acyutana dhyanavembo accumeccu talege Eri ||a || Vasudevanemba nama vadanadalli odaruve, maya Pasavembo angiyannu haridu haridu hakuve Kesavana huvva mudidu kunidu kunidu aduve, ketta Doshavembo godeyannu kedari kedari hakuvantha || Krushnanangrikamaladalli soragi biluve, Bava Kashtavembo kumbavannu odedu odedu hakuve Nishtarannu kandu avara hinde hinde…