Haridasa Sahitya — Vyasadasa
Hosakannu enage hacchalibeku
ಹೊಸಗಣ್ಣು ಎನಗೆ ಹಚ್ಚಲಿಬೇಕು
Composer: Haridasa · Deity: Lakshmi Devi · Genre: Dasara Pada
Kannada lyrics
ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುವೆನು |ಪ| ಘಸಣಿಯಾಗುವೆ ಭವ ವಿಷಯ ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ |ಅ.ಪ| ಪರರ ಅನ್ನವನುಂಡು ಪರರ ಧನವನು ಕಂಡುಪರಿ ಪರಿಯ ಕ್ಲೇಶಗಳನುಂಡು ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ || ಮಂದಹಾಸವೇ ಭವಸಿಂಧುವಿನೊಳಗಿಟ್ಟುಚಂದವೇ ಎನ್ನ ನೋಡುವುದು ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ || ಅಂದಚಂದಗಳೊಲ್ಲೆ ಬಂಧು ಬಳಗ ಒಲ್ಲೆಬಂಧನಕೆಲ್ಲ ಇವು ಕಾರಣವು ಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ಬೇಗ ||
Transliteration
Hosakannu enage hacchalibeku jagadambaa | vasudeva sutana kaambudake || pa || Ghasaneyaagide bhava vishaya vaaridhiyolu | shashimikhi karunadi kaaye ||a. Pa.|| Parara annavanundu | parara dhanava kandu pari pari kleshagalinda || Varamahaalakumi ninna charanakke morehokke karunadi kannetti node || 1 || Mandahaasini bhava | sindhuvinolagittu | chandave amma noduvadu | Kandanentendenna kundugalenisad…