Haridasa Sahitya — Vyasadasa
Hoova kode taayi varava kode
ಹೂವ ಕೊಡೆ ನೀ ವರವ ಕೊಡೆ
Composer: Harapanahalli Bheemavvanavaru · Deity: Lakshmi Devi · Genre: Bhakti
Kannada lyrics
ಹೂವ ಕೊಡೆ ನೀ ವರವ ಕೊಡೆ ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ|| ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು ಮುತ್ತೈದೆತನವ ಮುದದಿಂದ ಮುತ್ತೈದೆತನವ ಮುದದಿ ಬೇಡುವೆ ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ || ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು ಬಂಧುಗಳಿಗೆಲ್ಲ ಬಲುಕ್ಷೇಮ ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ ಇಂದಿರಾದೇವಿ ದಯಮಾಡೆ || ದಂಪತಿ ನಲಿಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ ಇಂಥ ಮಂದಿರಕೆ ಬಹುಮಾನಯಿರುವಂತೆ ಸಂತೋಷದಿ ವರವ ದಯಮಾಡೆ || ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ- ರಣ್ಯದಾನಗಳ ಹಿತದಿಂದ ಹಿ- ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ- ಪನ್ನ ನೀ ವರವ ದಯಮಾಡೆ || ಇಂದಿಗೆ ಮನೋಭೀಷ…
Transliteration
Hoova kode taayi varava kode | Devi ninnaya mudimyaalidda mallige || pa || Kattuvo tottilhuttuvo gandu makkalu | Muttaide tanava mudadinda | Muttaide tanava mudadinda beduve | Shreemahaalakshmiye namage daya maade || 1 || Andanaratha bandhoguva hennumakkalu | Bandhugaligella balu kshema | Bandhugaligella balu kshema iruvante | Indiraadevi dayamaade || 2 || Dampati nalisuta sampattu soubhaagya | In…